ಆಟಿಸಂ ಲಕ್ಷಣ ಹಾಗೂ ಕಾರಣ
“ಪ್ರತಿಯೊಂದು ಮಗುವಿನ ಬೆಳವಣಿಗೆ ಮತ್ತು ನಡವಳಿಕೆ ವಿಭಿನ್ನವಾಗಿರುತ್ತದೆ. ಆದರೆ, ಕೆಲವು ಪೋಷಕರಿಗೆ ‘ನನ್ನ ಮಗು ಯಾಕೆ ಬೇರೆ ಮಕ್ಕಳ ಹಾಗೆ ಇಲ್ಲ?’ ಎಂಬ ಆತಂಕ ಸದಾ ಕಾಡುತ್ತಿರುತ್ತದೆ.
ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಆಟಿಸಂ (Autism) ಲಕ್ಷಣಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಇದನ್ನು ಆರಂಭದಲ್ಲೇ ಗುರುತಿಸುವುದು ತುಂಬಾ ಮುಖ್ಯವಾಗಿದೆ. ಈ ಲೇಖನದಲ್ಲಿ ನಾವು ಮಗುವಿನ ಈ ವಿಬಿನ್ನ ಕಾರಣಗಳು ಮತ್ತು ಲಕ್ಷಣಗಳ ಬಗ್ಗೆ ವಿವರವಾಗಿ ತಿಳಿಯೋಣ.”
“ಮಕ್ಕಳಲ್ಲಿ ಆಟಿಸಂ” ಎಂದರೇನು ?

ಮಕ್ಕಳಲ್ಲಿ ಆಟಿಸಂ ಎಂದರೆ ಇದು ಯಾವುದೇ ರೋಗವಲ್ಲ. ಇದು ಮಗುವಿನ ಮಿದುಳಿನ ಬೆಳವಣಿಗೆಯ ಒಂದು ವಿಭಿನ್ನ ವಾದ ರೂಪ
ಈ ಸ್ಥಿತಿಯಲ್ಲಿರುವ ಮಕ್ಕಳು ಜಗತ್ತನ್ನು ನೋಡುವ , ವ್ಯವಹರಿಸುವ , ಇತರರೊಂದಿಗೆ ಸಂವಹನ ಮಾಡುವ ರೀತಿ ಸಾಮಾನ್ಯ ಮಕ್ಕಳಿಗಿಂತ ಸ್ವಲ್ಪ ಬೇರೇನೇ ಆಗಿರುತ್ತದೆ. ಸಾಮಾನ್ಯವಾಗಿ 2 ರಿಂದ 3 ವರ್ಷದೊಳಗೆ ಮಕ್ಕಳಲ್ಲಿ ಆಟಿಸಂ ಲಕ್ಷಣ ಕಾಣಿಸುತ್ತದೆ
ಆಟಿಸಂ ಕಾರಣಗಳು
- ಜೆನೆಟಿಕ್ ಕಾರಣಗಳು
- ಮೆದುಳಿನ ಬೆಳವಣಿಗೆಯ ವ್ಯತ್ಯಾಸ
- ಗರ್ಭಧಾರಣೆಯ ಸಮಯದಲ್ಲಿ ಸಮಸ್ಯೆ

- ಪರಿಸರದ ಪ್ರಭಾವ
- ಕುಟುಂಬದಲ್ಲಿ ಈಗಾಗಲೇ ಯಾರಾದರೂ ಈ ರೀತಿ ಇದ್ದರೆ
- ಮಾನಸಿಕ ಒತ್ತಡ
ಆಟಿಸಂ ಲಕ್ಷಣಗಳು
- Eye contact ಇಲ್ಲದೆ ಇರುವುದು
- ಕರೆದಾಗ ಪ್ರತಿಕ್ರಿಯಿಸದೇ ಇರುವುದು
- ಮಾತನಾಡದೆ ಇರುವುದು
- ಒಂದೇ ಕೆಲಸವನ್ನು ಮತ್ತೆ ಮತ್ತೆ ಮಾಡುವುದು
- ಇತರ ಮಕ್ಕಳ ಜೊತೆ ಬೇರೆಯದೇ ಇರುವುದು

- ಒಂಟಿಯಾಗಿ ಇರಲು ಇಷ್ಟ ಪಡುವುದು
- ಭಾವನೆಗಳನ್ನು ವ್ಯಕ್ತಪಡಿಸಲು ಕಷ್ಟಪಡುವುದು
- ಕೈ ತಿರುಗಿಸುವುದು ಮತ್ತು ಮಾಡಿದ ಕೆಲಸ ಪುನಃ ಪುನಃ ಮಾಡುವುದು
- ದಿನಚರಿ ಬದಲಾದರೆ ಕೋಪ ಬರುವುದು
ಪ್ರತಿ ಮಗುವಿನಲ್ಲಿಯೂ ಲಕ್ಷಣ ಗಳು ಬೇರೆ ಬೇರೆ ರೀತಿಯಲ್ಲಿ ಇರುತ್ತವೆ ..ಬೇಗ ಗುರುತಿಸಿ ಸರಿಯಾದ ಮಾರ್ಗದರ್ಶನ ತೆಗೆದುಕೊಂಡರೆ ಸರಿಯಾದ ನಿರ್ಧಾರ ತೆಗೆದು ಕೊಳ್ಳಲು ಸುಲಭ ವಾಗುವುದು
ಪ್ರತಿ ಮಗು ಒಂದೇ ರೀತಿಯಾಗಿರಬೇಕೆಂದಿಲ್ಲ…
ಆಟಿಸಂ ಒಂದು ದುರ್ಬಲತೆ ಅಲ್ಲ.ಅವರ ನಗು, ಭಾವನೆ ಮತ್ತು ಲೋಕ ಸ್ವಲ್ಪ ವಿಭಿನ್ನವಾಗಿರಬಹುದು
ಸರಿಯಾದ ಪ್ರೀತಿ, ಅರ್ಥಮಾಡಿಕೊಳ್ಳುವಿಕೆ ಮತ್ತು ಬೆಂಬಲ ಸಿಕ್ಕರೆ ಪ್ರತಿಯೊಂದು ಮಗು ತನ್ನದೇ ಆದ ಸುಂದರ ಲೋಕದಲ್ಲಿ ಬೆಳಗಬಹುದು.”
ನಿಮಗೆ ಆಟಿಸಂ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಮತ್ತೆ ಪರಿಹಾರ ಬೇಕಿದ್ದರೆ contact ಮಾಡಿ
vinnashetty4gmailcom
